TY - BOOK AU - ಶೋಬರ್ಗ್, ಜೆನೆಟ್ ರೂಸ್ (Shoberg, Janet Roos) AU - ಉಮೇಶ, ಎಚ್. ಎಸ್. (Umesha, H. S.) TI - ರಂಗಭೂಮಿ ಮತ್ತು ಪ್ರೇಕ್ಷಕರ ನಡುವಿನ ಅಂಚಿನಲ್ಲಿ (Rangabhoomi mattu prekshakara naduvina anchinalli) U1 - 792 SHO PY - 2005/// CY - Mysore PB - Rangayana KW - Theater KW - Audience N2 - ಕನ್ನಡ ರಂಗಭೂಮಿ ಅತ್ಯಂತ ಶ್ರೀಮಂತವಾದುದು. ಅದರ ಪ್ರದರ್ಶನ ಪರ೦ಪರೆ ದೊಡ್ಡದು. ಆ ಪರ೦ಪರೆಯನ್ನು ಹೆಚ್ಚು ಸೈದ್ಧಾಂತಿಕಗೊಳಿಸಲು ಮತ್ತು ಶಿಸ್ತುಬದ್ಧವಾದ ಶಿಕ್ಷಣಕ್ಕೆ ಒಳಪಡಿಸಲು ಹಲವು ಕಾರ್ಯಾಗಾರಗಳು ಹಲವು ರಂಗಶಾಲೆಗಳು ಕಳೆದೆರಡು ದಶಕಗಳಿಂದ ಹೆಚ್ಚು ಕ್ರಿಯಾಶೀಲವಾಗಿವೆ. ಆದರೂ ರಂಗ ವಿದ್ಯಾರ್ಥಿಗಳ ಓದಿಗೆ ಬೇಕಾದ ಮೂಲ ಸಾಮಗ್ರಿಗಳ ಕೊರತೆ ಕಾಣಿಸುತ್ತದೆ. ಅದರಲ್ಲೂ ತರಬೇತಿಯ ಕ್ರಮಗಳನ್ನು ಕುರಿತ ಕೃತಿಗಳು ಕಡಿಮೆ. ಆ ಕೊರತೆಯನ್ನು ನೀಗಿಸುವಲ್ಲಿ ಇದು ಒಂದು ಪುಟ್ಟ ಪ್ರಯತ್ನ. ಈ ಕೃತಿ ನಟರನ್ನು, ನಿರ್ದೇಶಕರನ್ನು ಅಥವಾ ರಂಗತಜ್ಞರನ್ನು ರೂಪು ಗೊಳಿಸುವ ಉದ್ದೇಶವನ್ನು ಹೊಂದಿಲ್ಲ. ಪ್ರೇಕ್ಷಕರಲ್ಲಿ ನಾಟಕದ ಒಲವನ್ನು ಬೆಳೆಸುವ ವಿಧಾನವನ್ನು ಇದು ಶೋಧಿಸುತ್ತದೆ. ರಂಗಭೂಮಿಯನ್ನು ಪ್ರೀತಿಸುವುದು, ಅದರಲ್ಲಿ ಭಾಗಿಯಾಗುವುದು ಶಿಕ್ಷಣ ಎಂಬ ವಿಸ್ತಾರ ನೆಲೆಯಲ್ಲಿ ಇಲ್ಲಿನ ವಿಚಾರಗಳಿವೆ, ಅಭ್ಯಾಸಗಳಿವೆ. ಸೈದ್ಧಾಂತಿಕ ಚರ್ಚೆ ಇದರ ಮುಖ್ಯ ಗುರಿಯಲ್ಲ. ಚಟುವಟಿಕೆಗಳ ಮೂಲಕ ರಂಗಭೂಮಿಯನ್ನು ಅರ್ಥೈಸಿಕೊಳ್ಳ ಬೇಕಿರುವುದರಿಂದ ರಂಗ ಅಭ್ಯಾಸಗಳೆ ಇದರ ತಿರುಳಾಗಿದೆ ER -