ರೂಪರೂಪಗಳನು ದಾಟಿ (Ruparupagalanu daati) : ಎಸ್. ದಿವಾಕರ್ ಅವರ ಅತ್ಯುತ್ತಮ ಬರಹಗಳು (S. Diwakar avara atyuttama barahagalu) / edited by ನರೇಂದ್ರ ಪೈ (Narendra Pai). - 1st ed. - Bangalore : Akruti Pusthaka, 2014c. - xxii, 384 p. ; 22 cm.

ಕ್ರೌರ್ಯ --
ದಾರಿಯಲ್ಲಿ --
ದಾರಿ ನೂರಾರುಂಟು ಬೆಳಕಿನರಮನೆಗೆ --
ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ --
ಉಚ್ಚಾಟನೆ --
ಹರಕೆ --
ಪೆಟ್ಟಿಗೆ --
ದ್ವಂದ್ವ --
ಜಗನ್ನಾಥ --
ನಿಗೂಢ --
ಜಗವೇ ಮಾಯ --
ಇಲ್ಲಿ ಕವಿದಿದೆ ಮೌನ --
ಏಕಾಂತದ ಮೊರೆ --
ನಿರೀಕ್ಷೆ --
ಮಸಿ ಕಾಣಿಕೆ --
ಹೆಪ್ಪುಗಟ್ಟಿದ ನೀರು --
ನಾಪತ್ತೆಯಾದ ಗ್ರಾಮಾಫೋನು --
ಹಳದಿ --.

ದಿವಾಕರ್ ಅವರ ಪ್ರಧಾನ ಆಸಕ್ತಿಗಳತ್ತ ಗಮನಿಸಿ, ಸಾಹಿತ್ಯ, ಓದು, ಅನುವಾದ ಮತ್ತು ಬರವಣಿಗೆ ಇಲ್ಲಿ ಪ್ರಧಾನವಾದದ್ದು. ಇದರ ಜೊತೆ ಅವರು 'ಶತಮಾನದ ಸಣ್ಣಕತೆಗಳು', 'ಬೆಸ್ಟ್ ಆಫ್ ಕೇಫ', 'ಕನ್ನಡದ ಅತಿಸಣ್ಣ ಕತೆಗಳು', 'ನಾದದ ನವನೀತ' ಎಂದೆಲ್ಲ ಸಂಪಾದನ ಕ್ರಿಯೆಯಲ್ಲೂ ಸಕ್ರಿಯರಾಗಿದ್ದವರು. 'ಮಲ್ಲಗೆ, 'ಸುಧಾ'ದಂಥ ಪತ್ರಿಕೆಗಳ ಸಂಪಾದಕರಾಗಿಯೂ ಹೆಸರು ಮಾಡಿದವರು. ಸಂಗೀತ ಅವರ ಇನ್ನೊಂದು ಪ್ರಧಾನ ಆಸಕ್ತಿ. ಚಿತ್ರಕಲೆ, ಫೋಟೋಗ್ರಫಿ, ಬಣ್ಣಗಳು ಅವರನ್ನು ಸದಾ ಆಕರ್ಷಿಸಿವೆ, ಪ್ರಬಂಧಗಳಲ್ಲಿಯೂ ಸಾದಾ ಲಅತ ಪ್ರಬಂಧಗಳದೇ ಒಂದು ಸೊಗಸಾದರೆ, ಕುಲಿತಿಟ್ಟು ಡೂಡೋ, ಇರುವೆ, ಕಾಗೆ, ೫ರಲೆಗಳ ಬಗ್ಗೆ ಬರೆದ ಅವರ ಪ್ರಬಂಧಗಳು ಕೂಡ ವಿಜ್ಞಾನದಿಂದ, ಸಾಹಿತ್ಯದಿಂದ, ಪರಂಪರೆುಂದ, ದೇಶವಿದೇಶಗಳ ಮಾಹಿತಿಯಿಂದ ಏಶಿಷ್ಟವಾದ ಒಂದು ಪರಸ್ಪರ ಅಂತರ್ ಸಂಬಂಧವನ್ನು ಹೆಣೆದು ಜಡಬಲ್ಲ ಕಸೂತಿಯಂಥ ವಿನ್ಯಾಸವನ್ನು ತಳೆದು ಅಚ್ಚರಿ ಹುಟ್ಟಸುತ್ತವೆ. ಸಂಗೀತಕ್ಕೆ ಬಂದರೆ ಅವರು ಭೀಮಸೇನ ಜೋಶಿ, ಮಂಗಳಪಲ್ಲ, ಶೆಮ್ಮಗುಂಡಿ ಮುಂತಾದವರ ಬಗ್ಗೆ ಬರೆಯಬಲ್ಲಷ್ಟೇ ಸೊಗಸಾಗಿ ಹಾರ್ಮೋನಿಯಂ, ತಂಬೂರಿಗಳ ಬಗ್ಗೆ ರಸವತ್ತಾಗಿ ಬರೆಯಬಲ್ಲರು, ಚಿಲಾಸಖಾನಿ ತೋಡಿ, ಸುಗಮ ಸಂಗೀತದ ಬಗ್ಗೆ ವಿವರಿಸಬಲ್ಲರು. ಇನ್ನು ಸಾಹಿತ್ಯದ ಬಗ್ಗೆ, ಸಾಹಿತಿಗಳ ಬಗ್ಗೆ, ಪುಸ್ತಕಗಳ ಬಗ್ಗೆ ತಮ್ಮ ಅರಿವಿನ ವಿಚಾರದಲ್ಲಿ ಅವರಾಗಲೇ ದಂತಕತೆ ಯಾಗಿ ಬಿಟ್ಟಿದ್ದಾರೆ. ಎಸ್ ವಿವಾಕರ್‌ಗೆ ಗೊತ್ತಿಲ್ಲದ ಲೇಖಕನಿಲ್ಲ, ಪುಸ್ತಕವಿಲ್ಲ ಎಂಬಷ್ಟು ಅವರೊಂದು ವಿಶ್ವಕೋಶವೆಂಬಂಥ ವಿಶ್ವಾಸ ಅವರ ಸಹವರ್ತಿಗಳಲ್ಲ, ಬರಹಗಾರರಲ್ಲಿ ಇದೆ. ಅಂಥವರು ಸಾಹಿತ್ಯದ ಬಗ್ಗೆ, ಪುಸ್ತಕಗಳ ಬಗ್ಗೆ ಬರೆದಾಗ ತಮ್ಮ ಓದಿನ ಅನುಭವದಿಂದ ಮಾತನಾಡುತ್ತಿದ್ದಾರೆ, ತಮ್ಮ ಓದಿಗೆ ದಕ್ಕಿದ ಶ್ರೇಷ್ಠ ಕೃತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ನಿರೀಕ್ಷೆ, ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿಯೇ, ಅವರು ಕನ್ನಡದ ಉದಯೋನ್ಮುಖರಿಗಷ್ಟೇ ಅಲ್ಲ, ನುಲತ ತಲೆಮಾರಿನ ಬರಹಗಾರರಿಗೆ ಕೂಡ ಗುರುವಿದ್ದಂತೆ, ಎಸ್ ದಿವಾಕರ್ ಅವರಿಗೆ ಸಾಹಿತ್ಯ, ಓದು, ಬರವಣಿಗೆ, ಅನುವಾದ, ಸಾಹಿತಿ ಮಿತ್ರರೊಂದಿಗಿನ ಸಂವಾದ ಪ್ರತಿಯೊಂದು ಬದುಕಿನ ಫ್ಯಾಷನ್. ಅದು ಅವರ ಉಸಿರು, ಬದುಕಿನಷ್ಟೇ ಮುಖ್ಯವಾದದ್ದು. ಹಾಗಾಗಿಯೇ ಅವರ ಸಾನಿಧ್ಯ, ಸಾಮಿಪ್ಯ ಮತ್ತು ಸಾಂಗತ್ಯ ಸದಾ ಕಾಲ ಹೊಸತನ್ನು, ಅನಿರೀಕ್ಷಿತವಾದದ್ದನ್ನು ಕಾಣಿಸುತ್ತಿರುತ್ತದೆ. ಅವರ ಓದು, ಉತ್ಸಾಹ ಮತ್ತು ಕನಸುಗಳಷ್ಟೇ ಅವರ ನೆನಪಿನ ಶಕ್ತಿ ಕೂಡ ಅಗಾಧವಾದದ್ದು. ಕನ್ನಡದಲ್ಲಿರಲಿ, ಇತರ ಭಾಷೆಯಲ್ಲೇ ಇರಲಿ, ಕತೆಯ ಪ್ರಧಾನ ಕೆಲಸವೇ ಮನರಂಜನೆ; ಮನಸ್ಸನ್ನು ರಂಜಿಸುವುದರೊಂದಿಗೆ ಅದು ಇನ್ನಷ್ಟನ್ನು ಮತ್ತಷ್ಟನ್ನು ಮಾಡಬಹುದು, ಮಾಡಬೇಕು ಎಂಬುದು ಅನ್ವೇಷಣೆ, ಪ್ರಯೋಗ ಮತ್ತು ಮಹತ್ವಾಕಾಂಕ್ಷೆ . ಈ ಜಾಡನ್ನು ಹಿಡಿದು ಹೊರಟವರು ಎಸ್. ದಿವಾಕರ್. ಒಂದು ಸಂಸ್ಥೆಯಂತೆ ಕೆಲಸ ಮಡಿದ ವ್ಯಕ್ತಿ, ಅತ್ಯತ್ತಮವಾದುದ್ದನ್ನು ಕೊಟ್ಟು ತೆರೆಮರೆಯಲ್ಲಿ ಉಳಿದ ವ್ಯಕ್ತಿ. ಸಮಗ್ರವಾಗಿ ಕಣ್ಮುಂದೆ ನಿಲ್ಲುವಂತೆ ಮಾಡಬಲ್ಲ ಒಂದು ಕೃತಿ ಬೇಕು. ಆ ನಿಟ್ಟಿನಲ್ಲಿ ಇದೊಂದು ಪುಟ್ಟ ಪ್ರಯತ್ನ.


Collected writtings--S. Diwakar.
Poems--S. Diwakar.
Essays--S. Diwakar.

894.814 PAI